Big Bash League 2022-23 :15 ರನ್ ಗಳಿಗೆ ಸಿಡ್ನಿ ಥಂಡರ್ ತಂಡ ಆಲೌಟ್...!
ಇಲ್ಲಿನ ಸಿಡ್ನಿ ಷೋ ಗ್ರೌಂಡ್ ನಲ್ಲಿ ನಡೆದ ಬಿಗ್ ಬ್ಯಾಶ್ ಲೀಗ್ ನಲ್ಲಿ ಅಡಿಲೇಡ್ ಸ್ಟ್ರೈಕರ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡವು ಕೇವಲ 15 ರನ್ ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ರನ್ ಗಳಿಗೆ ಆಲೌಟ್ ಆಗಿರುವ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.
ಸಿಡ್ನಿ: ಇಲ್ಲಿನ ಸಿಡ್ನಿ ಷೋ ಗ್ರೌಂಡ್ ನಲ್ಲಿ ನಡೆದ ಬಿಗ್ ಬ್ಯಾಶ್ ಲೀಗ್ ನಲ್ಲಿ ಅಡಿಲೇಡ್ ಸ್ಟ್ರೈಕರ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡವು ಕೇವಲ 15 ರನ್ ಗಳಿಗೆ ಆಲೌಟ್ ಆಗಿದೆ. ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ರನ್ ಗಳಿಗೆ ಆಲೌಟ್ ಆಗಿರುವ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು.ಅಡಿಲೇಡ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ಕ್ರಿಸ್ ಲಾಯ್ನ್ ಡಿ ಗ್ರಾಂಡೋಮ್ಮೆ ಕ್ರಮವಾಗಿ 36 ಹಾಗೂ 33 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಇದನ್ನೂ ಓದಿ: ಮೈಸೂರು ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳಗಾರರಿಗೆ 21 ಕೋಟಿ ರೂ. ಪಾವತಿ: ಸಿಎಂ ಬೊಮ್ಮಾಯಿ
ಸಿಡ್ನಿ ಥಂಡರ್ ಪರವಾಗಿ ಫಜಾಲ್ ಹಕ್ ಫಾರೂಕಿ ಮೂರು ವಿಕೆಟ್ ಗಳನ್ನು ಪಡೆದು ಗಮನ ಸೆಳೆದರೆ, ಗುರಿಂದರ್ ಸಂಧು, ಡ್ಯಾನಿಯಲ್ ಸ್ಯಾಮ್ಸ್, ಮತ್ತು ಬ್ರೆಂಡನ್ ಡಾಗೆಟ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಮಿಂಚಿದರು.
Ramanagar : 125 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಅಡಿಲೇಡ್ ಸ್ಟ್ರೈಕರ್ಸ್ ನೀಡಿದ 139 ರನ್ ಗಳ ಗುರಿಯನ್ನು ಬೆನ್ನತ್ತಿದ ಸಿಡ್ನಿ ಥಂಡರ್ಸ್ ತಂಡವು ಅಡಿಲೇಡ್ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಕೇವಲ 15 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ರನ್ ಗಳಿಗೆ ಆಲೌಟ್ ಆದ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಯಿತು.ಅಡಿಲೇಡ್ ತಂಡದ ಪರವಾಗಿ ಹೆನ್ರಿ ತಾರ್ತನ್ ಹಾಗೂ ವೇಸ್ ಅಗರ್ ಕ್ರಮವಾಗಿ ಐದು ಹಾಗೂ ನಾಲ್ಕು ವಿಕೆಟ್ ಗಳನ್ನು ಪಡೆಯುವ ಮೂಲಕ ಸಿಡ್ನಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.